Menu
ಎಲ್ಲೋ ಹುಟ್ಟಿ ಎಲ್ಲೋ ಹರಿದು ಸಾಗರವ ಸೇರುವ ನದಿಯಂತಲ್ಲ ಮನುಷ್ಯನ ಜೀವನ. ಮಾನವನ ಜೀವನಕ್ಕೆ ನಿರ್ಧಿಷ್ಠವಾದ ಗುರಿಯೊಂದಿದೆ ಆ ಗುರಿಯು ಒಬ್ಬೊಬ್ಬರ ಬದುಕಿನಲ್ಲೂ ವಿಭಿನ್ನವಗಿರುತ್ತದೆ. ಯಾವುದೇ ವ್ಯಕ್ತಿ ತಾನಂದುಕೊಂಡ ಗುರಿಯನ್ನು ತಲುಪುವಲ್ಲಿ ಶಿಕ್ಷಣದ ಪಾತ್ರವು ಮಹತ್ತರವಾದದ್ದು. ಹಾಗೆಂದ ಮಾತ್ರಕ್ಕೆ ಶಾಲೆಗೆ ಹೋಗಿ ಕಲಿತವನು ಮಾತ್ರ ಸುಶಿಕ್ಷಿತನೆಂದಲ್ಲ.
ಜೀವನವೇ ಒಂದು ಶಾಲೆ, ದಿನನಿತ್ಯದ ಅನುಭವಗಳೇ ಶೈಕ್ಷಣಿಕ ಪಾಠಗಳು, ನಮ್ಮ ಜೀವನದಲ್ಲಿ ಬಂದು ಹೋಗುವ ಪ್ರತಿಯೊಬ್ಬ ವ್ಯಕ್ತಿ ಘಟನೆಗಳು ಹಾಗೂ ಸಂಭವಿಸುವ ವಿಷಯಗಳು ಪಠ್ಯ ವಿಷಯಗಳಾಗಿ ಪರಿಣಮಿಸುತ್ತವೆ.
ಮಗುವನ್ನು ನಾವು ಶಾಲೆಗೆ ಸೇರಿಸಿದ ದಿನದಂದು ವಿದ್ಯಾಭ್ಯಾಸವು ಪ್ರಾರಂಭವಾಗುತ್ತದೆ ಹಾಗೂ ಆ ವ್ಯಕ್ತಿ ಪದವಿ, ಸ್ನಾತಕೋತ್ತರ, ಸಂಶೋಧನೆ ಹಾಗೂ ಇನ್ನಿತರೆ ಉನ್ನತ ವ್ಯಾಸಂಗವನ್ನು ಮುಗಿಸಿದಾಗ ಅವನ/ಅವಳ ವಿದ್ಯಾಭ್ಯಾಸವು ಪರಿಪೂರ್ಣ ಎಂದು ಭಾವಿಸುತ್ತೇವೆ. ಆದರೆ… ವಿದ್ಯೆಯೆಂಬುದು ಕೇವಲ ಪುಸ್ತಕಗಳ ಪರಿಮಿತಿಯಲ್ಲಿ ಬರುವ ವಿಷಯವಲ್ಲ. ಬದಲಾಗಿ ‘EDUCATION IS AN ONGOING PROCESS FROM WOMB To TOMB’. ಶಿಕ್ಷಣವು ಭ್ರೂಣದಿಂದ ಪ್ರಾರಂಭಗೊಂಡು ವ್ಯಕ್ತಿಯು ಸಾವನ್ನಪ್ಪಿ ಸಮಾಧಿಯನ್ನು ಸೇರುವವರೆಗೂ ಸತತವಾಗಿ ಎಡಬಿಡದೆ ಸಾಗುವ ಒಂದು ಪಠ್ಯಕ್ರಮವಾಗಿದೆ.
ಕಲಿತವರು. ಯಾರು ಇಲ್ಲ. ಅಂತೆಯೇ, ಕಲಿಕೆಗೆ ಕೊನೆಯೂ ಇಲ್ಲ. ಜ್ಞಾನವೆಂಬುದು ಆಳ ಉದ್ದಗಲಗಳನ್ನು ಮೀರಿದ ಸಾಗರಕ್ಕೆ ಸಮಾನ, ನಮ್ಮ ಜ್ಞಾನವೆಂಬುದು ಆ ಸಾಗರದ ಒಂದು ಹನಿಗೂ ಸರಿದೂಗದ ಅರಿವು ಮಾತ್ರ.
Education is like an ocean that has no boundaries. And our knowledge is a drop of water in that ocean. According to Mahatma Gandhi ‘EDUCATION IS AN ALL ROUND DEVELOPMENT OF BODY, MIND AND SOUL.'”ದೇಹ, ಮನಸ್ಸು ಮತ್ತು ಆತ್ಮಗಳ ಸರ್ವತೋಮುಖವಾದ ಜೆಳವಣಿಗೆಯೇ’ ಶಿಕ್ಷಣವೆನ್ನುತ್ತಾರೆ ಗಾಂಧೀಜಿ
ಪ್ರೀತಿಯ ಪೋಷಕ ವರ್ಗದವರೇ, ಕುಣಿಗಲ್ ಪಟ್ಟಣದ ನಾಗರೀಕ ಬಂಧುಗಳೇ ಹಾಗೂ ನೆರೆಹೊರೆಯ ಸ್ಥಳೀಕರೇ, ನಮ್ಮನ್ನು ಹರಸಿ, ಉಳಿಸಿ, ಬೆಳೆಸಿದ ಸಕಲ ಬಂಧು ಬಾಂಧವರೇ… ಸ್ಟೆಲ್ಲಾ ಮೇರಿಸ್ ಶಾಲೆಯು 01-06-1990 ರಂದು ಕೇವಲ 3 ಮಕ್ಕಳೊಂದಿಗೆ ಪೂರ್ವ ಪ್ರಾಥಮಿಕ ಶಾಲೆಯಾಗಿ ಪ್ರಾರಂಭಗೊಂಡು ಇಲ್ಲಿಗೆ 34 ವಸಂತಗಳೊಂದಿಗೆ ತೂಗುಯ್ಯಾಲೆ ಆಡುತ್ತಾ 2024-25 ಸಾಲಿಗೆ ಹಂತ ಹಂತವಾಗಿ ಮುನ್ನಡೆದು ಸ್ಟೆಲ್ಲಾ ಮೇರಿಸ್ ಪದವಿ ಪೂರ್ವ ಕಾಲೇಜಾಗಿ ಅಂಕುರಗೊಂಡಿದೆ.
ಮೌಲ್ಯಾಧಾರಿತ ಶಿಕ್ಷಣ, ಶಿಸ್ತು ಹಾಗೂ ಪ್ರೀತಿಯನ್ನೇ ಪಠ್ಯ ವಿಷಯವನ್ನಾಗಿಸಿಕೊಂಡು ಪಾಠ ಪ್ರವಚನಗಳನ್ನು ಮಾಡಿದ ನಮ್ಮೊಂದಿಗೆ ಸಹಕರಿಸಿ ಸದಾ ನಮ್ಮನ್ನರಸಿದ ನಿಮ್ಮೆಲ್ಲರಿಗೂ ನಮ್ಮ ಮನದಾಳದ ನೆನಕೆಗಳು.
The basic foundation of education is the Values of Life. The true spirit of Discipline, Humility, and humanity will make the students grow in an environment of true ‘ Love’ which will take them to a New Horizon of Freedom where there is no BONDAGE OF SLAVERY. ‘STELLA’ and its management have a different outlook and philosophy to preach it’s future generations and the outcome will be a TRUE PHILOSOPHY OF LIFE WITH REALITY AND PRACTICALITY which will make them shine like the Stars in the Sky.
We provide the highest quality education so that all of our students are empowered to lead productive and fulfilling lives as lifelong learners and responsible citizens.